== ಕರ್ನಾಟಕದ ಸೀಮಿತ ನೆಲೆಯ ಹಕ್ಕಿಗಳು == ಸೀಮಿತ ನೆಲೆಯಲ್ಲಷ್ಟೇ () ಬದುಕಿರುವ ಹಕ್ಕಿಗಳು ಕೆಲವು, ಆ ಪ್ರದೇಶದ ಹೊರತು ಇವುಗಳು ಭೂಮಿಯ ಬೇರೆಡೆ ಕಾಣಸಿಗುವುದಿಲ್ಲ. ಒಂದು ವಾತಾವರಣ ಇಲ್ಲವೇ ಭೂಮೇಲ್ಮೈ ಲಕ್ಷಣ ಇಲ್ಲವೇ ಬೇರೆಡೆ ವಲಸೆ ಹೋಗಲು ಸಾಧ್ಯವಾಗದಂತಹ ದುರ್ಗಮ ಪ್ರದೇಶಕ್ಕೆ ಹೊಂದಿಕೊಂಡಿರುವ ಜೀವಿಯೊಂದು ಆ ಆವಾಸವನ್ನು ಬಿಟ್ಟು ಬೇರೆಡೆ ಹೊಂದಾಣಿಕೆ ಮಾಡಿಕೊಂಡು ಬದುಕಲಾಗುವುದಿಲ್ಲ. ಹೀಗಾಗಿ ಸೀಮಿತ ನೆಲೆಯನ್ನೇ ನಂಬಿರುವ ಈ ಜೀವಿಗಳು ಬದಲಾಗುವ ಸ್ಥಿತಿಗತಿಗಳಿಗೆ ಸ್ಪಂದಿಸದೆ ನಿರ್ಗಮಿಸುತ್ತವೆ. ಇಂತಹವು ದಕ್ಷಿಣ ಏಷಿಯದಲ್ಲಿ 190 ಇವೆ, ಇವುಗಳಲ್ಲಿ ಭಾರತದ 78 ಹಕ್ಕಿಗಳೂ ಸೇರಿವೆ. ಭಾರತದ 78 ಎಂಡೆಮಿಕ್‌ ಗಳಲ್ಲಿ ಕರ್ನಾಟಕ 37 ಹಕ್ಕಿಗಳೂ ಸೇರಿವೆ. ಇವುಗಳಲ್ಲಿ 16 ಕರ್ನಾಟಕದ ಪಶ್ಚಿಮಘಟ್ಟ ವಾಸಿಗಳು ಅತ್ಯಂತ ಕಡಿಮೆ ಪ್ರದೇಶದಲ್ಲಿ (ಕೆಲವೇ ಎಕರೆ ಪ್ರದೇಶದಲ್ಲಿ) ಬದುಕುಳಿದಿವೆ.